ಪುಟ್ಟ ಪ್ರೇಮ ಕಥೆ.....!!!!!

ಅವನಿಗೆ ಕ್ಯಾನ್ಸರ್ ಅಂದರು ಡಾಕ್ಟರ್. ಹೆಚ್ಚೆಂದರೆ ಇನ್ನು ಒಂದು ತಿಂಗಳು ಮಾತ್ರ ಬದುಕಿರಬಹುದು ಎಂದರು. ಆತ ಸಿ.ಡಿ ಅಂಗಡಿಯಲ್ಲಿ ಕೆಲಸವನ್ನು ಮಾಡುತಿದ್ದ ಅವಳನ್ನು ಬಹಳ ಪ್ರೀತಿಸುತಿದ್ದ. ಆದರೆ ಆಕೆಗೆ ತನ್ನ ಪ್ರೀತಿಯನ್ನು ಹೇಳಿರಲಿಲ್ಲ. ಆತ ಸಿ.ಡಿ ಅಂಗಡಿಗೆ ಹೋಗುತಿದ್ದ. ಅವಳೊಂದಿಗೆ ಮಾತಾಡಲೆಂದು ಸಿ.ಡಿಯನ್ನು ಖರೀದಿಸುತಿದ್ದ. 
ಒಂದು ತಿಂಗಳ ನಂತರ ಅವನು ಸತ್ತು ಹೋದ. ದಿನವೂ ಬರುತಿದ್ದ ಅವನು ಬಾರದಿದ್ದಾಗ ಅವಳಿಗೆ ಕಳವಳವಾಯಿತು. ಅವನ ಮನೆಗೆ ಹೋದಳು. ಅವನ ತಾಯಿ ಅವನು ನಿಧನವಾದನೆಂದು ಹೇಳಿದಳು. ಅವನ ತಾಯಿ ಆಕೆಯನ್ನು ಆತನ ರೂಮಿಗೆ ಕರೆದುಕೊಂಡು ಹೋದಳು.
ಆತನ ಟೇಬಲ್ ಮೇಲೆ ಸಿ.ಡಿಗಳೆಲ್ಲ ಹರಡಿಕೊಂಡು ಬಿದ್ದಿರುವುದು ಕಾಣಿಸಿತು. ಅವಳು ಹತ್ತಿರ ಹೋಗಿ ನೋಡಿದಳು. ಯಾವ ಸಿ.ಡಿ ಗಳು ಓಪನ್ ಆಗಿರಲಿಲ್ಲ ಅವಳು ಎಲ್ಲಾ ಸಿ.ಡಿಗಳನ್ನೂ ನೋಡಿದಳು. ಹೌದು. ಯಾವುದು ಓಪನ್ ಆಗಿರಲಿಲ್ಲ. ಅವಳು ಒಂದೇ ಸಮನೆ ಅಳತೊಡಗಿದಳು. ವಿಚಿತ್ರ ಸಂಕಟ, ವೇದನೆ ಅವಳನ್ನು ಆವರಿಸಿತು.
ಅವಳು ಅವನನ್ನು ವಿಪರೀತ ಪ್ರೀತಿಸುತಿದ್ದಳು. 
ಎಲ್ಲಾ ಸಿ.ಡಿಗಲ ಒಳಗೆ ಲವ್ ಲೆಟರನ್ನು ಇಟ್ಟಿದ್ದಳು!!!

No comments:

Post a Comment